Loading…
Loading…
(You are in the browser Reader mode)
ಅಧ್ಯಾಯ-16
ಕೃಪಾಕಾಲದ ಮುಕ್ತಾಯ
ಕೃಪಾಕಾಲ ಯಾವಾಗ ಮುಕ್ತಾಯವಾಗುತ್ತದೆಂದು ಯಾರಿಗೂ ತಿಳಿಯದು
ಮೂರನೇ ದೂತನ ಸಂದೇಶ ಹಾಗೂ ಕೃಪಾಕಾಲ ಯಾವಾಗ ಮುಕ್ತಾಯವಾಗುತ್ತದೆಂಬ ಬಗ್ಗೆ ದೇವರು ನಮಗೆ ಪ್ರಕಟಪಡಿಸಿಲ್ಲ. ಪ್ರಕಟಪಡಿಸಲ್ಪಟ್ಟಿರುವುದನ್ನು ನಾವು ಹಾಗೂ ನಮ್ಮ ಮಕ್ಕಳು ಅಂಗೀಕರಿಸಿಕೊಳ್ಳಬೇಕು. ಆದರೆ ಸರ್ವಶಕ್ತನ ಆಲೋಚನಾಸಭೆಯಲ್ಲಿ ರಹಸ್ಯವಾಗಿಡಲ್ಪಟ್ಟಿರುವುದನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸಬಾರದು. ಕೊಕಾಘ 132.1
ಕೃಪಾಕಾಲ ಯಾವಾಗ ಮುಕ್ತಾಯವಾಗುತ್ತದೆಂಬ ವಿಷಯದಲ್ಲಿ ನಿಮಗೆ ಏನಾದರೂ ವಿಶೇಷ ಬೆಳಕು ಕೊಡಲ್ಪಟ್ಟಿದೆಯೇ ಎಂದು ಅನೇಕರು ಶ್ರೀಮತಿ ವೈಟಮ್ಮನವರಿಗೆ ಪತ್ರದ ಮೂಲಕ ಕೇಳಿದ್ದರು. ಅದಕ್ಕೆ ಅವರು ಹಗಲಿರುವಾಗಲೇ ಕೆಲಸ ಮಾಡಿ, ರಾತ್ರಿ ಬಂದಾಗ ಯಾರೂ ಕೆಲಸ ಮಾಡಲಾಗದು ಎಂಬ ಸಂದೇಶದ ಮೂಲಕ ಉತ್ತರಿಸಿದ್ದರು (ಸೆಲೆಕ್ಟಡ್ ಮೆಸೇಜಸ್ ಸಂಪುಟ 1, 191, 1894). ಕೊಕಾಘ 132.2