Loading…
Loading…
(You are in the browser Reader mode)
ಅಧ್ಯಾಯ-20
ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು
ಪರಲೋಕ ಹಾಗೂ ನೂತನಾಕಾಶ ಮಂಡಲ ಮತ್ತು ನೂತನ ಭೂಮಂಡಲಗಳ ಬಗ್ಗೆ ಶ್ರೀಮತಿ ವೈಟಮ್ಮನವರಿಗೆ ಕೊಡಲ್ಪಟ್ಟ ಅನೇಕ ದರ್ಶನಗಳು ಶಾಶ್ವತವಾದ ವಾಸ್ತವಾಂಶಗಳ ನಿರೂಪಣೆ ಅಥವಾ ಸಂಕೇತಗಳಾಗಿವೆ. ಪರಲೋಕಕ್ಕೆ ಸಂಬಂಧಪಟ್ಟ ವಿಷಯಗಳನ್ನು ಅವರಿಗೆ ಮಾನವ ಪರಿಕಲ್ಪನೆಯಲ್ಲಿ (Concept) ತೋರಿಸಲಾಯಿತು. ಮಾನವರಾದ ನಮ್ಮಗ್ರಹಿಸುವ ಶಕ್ತಿ ಮತ್ತು ಭಾಷೆಯು ಇತಿಮಿತಿಯಲ್ಲಿರುವುದರಿಂದ ಪರಲೋಕದ ದೃಶ್ಯಗಳ ವಾಸ್ತವತೆಯನ್ನು ನಾವು ಸಂಪೂರ್ಣವಾಗಿ ತಿಳಿಯಲಾಗದು. ಈ ಕಾರಣದಿಂದಲೇ ಪೌಲನು “ಈಗ ಕಂಚಿನ ದರ್ಪಣದಲ್ಲಿ ಕಾಣಿಸುವಂತೆ ದೇವರ ಮುಖವು ನಮಗೆ ಮೊಬ್ಬಾಗಿ ಕಾಣಿಸುತ್ತದೆ; ಆಗ ಮುಖಾಮುಖಿಯಾಗಿ ಆತನನ್ನು ನೋಡುವೆವು; ಈಗ ಸ್ವಲ್ಪ ಮಾತ್ರ ನನಗೆ ತಿಳಿದದೆ. ಆಗ ದೇವರು ಸಂಪೂರ್ಣ ನನ್ನನ್ನು ತಿಳುಕೊಂಡಂತೆ ನಾನು ಸಂಪೂರ್ಣವಾಗಿ ತಿಳುಕೊಳ್ಳುವೆನು’ ಎಂದು ಹೇಳುತ್ತಾನೆ (1 ಕೊರಿಂಥ 13:12). ಕೊಕಾಘ 166.1