Loading...

Loading

Loading
(You are in the browser Reader mode)

ಮುನ್ನುಡಿ

ಸುವಾರ್ತೆಯ ಅತ್ಯಂತ ಪ್ರಮುಖವಾದ ಸತ್ಯಾಂಶ ಹಾಗೂ ವಿಶ್ವಾಸಿಗಳ ಅತ್ಯಂತ ಅಮೂಲ್ಯವಾದ ನಿರೀಕ್ಷೆಯು ಯೇಸುಕ್ರಿಸ್ತನು ಎರಡನೇ ಸಾರಿ ಬರುತ್ತೇನೆಂದು ಮಾಡಿದ ವಾಗ್ದಾನವೇ ಆಗಿದೆ. ತಾನು ಯಾವಾಗ ಬರುತ್ತೇನೆಂದು ಆತನು ಪ್ರಕಟಪಡಿಸಲಿಲ್ಲ, ಆದರೆ ತನ್ನ ಬರೋಣವು ಹತ್ತಿರವಾಗಿದೆ ಎಂಬುದನ್ನು ತಿಳಿಸುವ ಸೂಚನೆಗಳನ್ನು ಕ್ರಿಸ್ತನು ನೀಡಿದ್ದಾನೆ. ಕೊಕಾಘ 3.1

ನಾವು ವಾಸಿಸುತ್ತಿರುವ ಈ ಪುಟ್ಟಲೋಕವು ಸಮಸ್ತ ಲೋಕಕ್ಕೆ ಒಂದು ಪಠ್ಯಪುಸ್ತಕವಾಗಿದೆ ಎಂದು ಶ್ರೀಮತಿ ವೈಟಮನವರು ತಿಳಿಸುತ್ತಾರೆ. ಇದರಲ್ಲಿ ಪಾಪದ ಭಯಾನಕವಾದ ಫಲಿತಾಂಶಗಳು ಮತ್ತು ಕ್ರಿಸ್ತನ ಎರಡನೇ ಬರೋಣದಲ್ಲಿ ನೀತಿವಂತರ ವಿಜಯೋತ್ಸವದಲ್ಲಿ ಅತ್ಯುನ್ನತ ಮಟ್ಟ ತಲುಪುವ ದೇವರ ಶ್ರೇಷ್ಠ ಪ್ರೀತಿಯು ಕಂಡುಬರುತ್ತದೆ. ಕೊಕಾಘ 3.2

ಶ್ರೀಮತಿ ವೈಟಮ್ಮನವರು ತಮ್ಮ ಬರಹಗಳಲ್ಲಿ ಪವಿತ್ರಾತ್ಮ ಪ್ರೇರಿತರಾಗಿ ಈ ಲೋಕದಲ್ಲಿ ಕೊನೆಯ ಕಾಲದಲ್ಲಿ ನಡೆಯುವ ಘಟನೆಗಳು ಹಾಗೂ ಕ್ರಿಸ್ತನ ಬರೋಣವನ್ನು ಕಣ್ಣಿಗೆ ಕಟ್ಟಿದಂತೆ ವರ್ಣಿಸಿದ್ದಾರೆ. ಈ ಲೋಕದ ಇತಿಹಾಸವು ತನ್ನ ಅತ್ಯುನ್ನತ ಪರಾಕಾಷ್ಠೆ ಮುಟ್ಟಿಲು ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಈ ಪುಸ್ತಕದಲ್ಲಿ ಶ್ರೀಮತಿ ವೈಟಮ್ಮನವರು ಕೊನೆಯ ಕಾಲದಲ್ಲಿ ನಡೆಯಲಿರುವ ಘಟನೆಗಳ ಬಗ್ಗೆ ಅತ್ಯಂತ ಪ್ರಾಮುಖ್ಯವಾಗಿ ತಿಳಿಸಿದ್ದಾರೆ. ಈ ಮಹತ್ವದ ವಿಷಯಗಳು ಇಂದಿಗೂ ಸಹ ವಿಶೇಷವಾಗಿ ಅನ್ವಯಿಸುತ್ತವೆ. ಕೊಕಾಘ 3.3