Loading...

Loading

Loading
(You are in the browser Reader mode)

ಅಧ್ಯಾಯ-12
ಗೋಧಿಯನ್ನು ಹೊಟ್ಟಿನಿಂದ ಬೇರ್ಪಡಿಸುವ ಸಮಯ

ಸಭೆಯ ಸದಸ್ಯತ್ವವು ರಕ್ಷಣೆಗೆ ಖಾತರಿ ನೀಡುವುದಿಲ್ಲ

ಸಭೆಯ ನೋಂದಣಿ ಪುಸ್ತಕದಲ್ಲಿ ಹೆಸರು ದಾಖಲಿಸಲ್ಪಟ್ಟಿರುವ ಇಪ್ಪತ್ತು ಜನರಲ್ಲಿ ಒಬ್ಬರೂ ಸಹ ಈ ಲೋಕದ ಅಂತ್ಯಕ್ಕೆ ಸಿದ್ದರಾಗಿಲ್ಲ. ಅವರು ಈ ಲೋಕದ ಸಾಧಾರಣ ಪಾಪಿಗಳಂತೆಯೇ ದೇವರಿಲ್ಲದೆ ಹಾಗೂ ಯಾವುದೇ ನಿರೀಕ್ಷೆಯಿಲ್ಲದೆ ಜೀವಿಸುತ್ತಾರೆಂದು ಶ್ರೀಮತಿ ವೈಟಮ್ಮನವರು ಅಡ್ವೆಂಟಿಸ್ಟ್ ಸಭೆಗೆ ಗಂಭೀರವಾಗಿ ಎಚ್ಚರಿಕೆ ನೀಡಿದ್ದಾರೆ (ಕ್ರಿಶ್ಚಿಯನ್ ಸರ್ವಿಸ್, ಪುಟ 41, 1893). ಕೊಕಾಘ 99.1

ಅನೇಕರು ಸತ್ಯವನ್ನು ಅಂಗೀಕರಿಸಿಕೊಂಡು, ತಾವು ದೇವರಾಜ್ಞೆಗಳನ್ನು ಕೈಕೊಂಡು ನಡೆಯುವ ಸೆವೆಂತ್ ಡೇ ಅಡ್ವೆಂಟಿಸ್ಟರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಹೆಸರಿಗೆ ಮಾತ್ರ ಕ್ರೈಸ್ತ ಸಭೆಗಳೆಂದು ಹೇಳಿಕೊಳ್ಳುವವರಂತೆಯೇ ತಮ್ಮನ್ನು ದೇವರಿಗೆ ಪ್ರತಿಷ್ಟಿಸಿಕೊಂಡಿರುವುದಿಲ್ಲ. ದೇವರಾಜ್ಞೆಗಳನ್ನು ವಿರೋಧಿಸುವ ಇಂತಹ ಸಭೆಗಳ ಮೇಲೆ ಹೇಗೆ ಕೊನೆಯ ಉಪದ್ರವಗಳು ಬೀಳುತ್ತವೋ, ಅದೇ ರೀತಿ ತಮ್ಮನ್ನು ದೇವರಿಗೆ ಸಂಪೂರ್ಣವಾಗಿ ಪ್ರತಿಷ್ಟಿಸಿಕೊಳ್ಳದ ಅಡ್ವೆಂಟಿಸ್ಟರೂ ಸಹ ಕೊನೆಯ ಏಳು ಉಪದ್ರವಗಳಿಗೆ ಒಳಗಾಗುತ್ತಾರೆ (ಮ್ಯಾನುಸ್ಕ್ರಿಪ್ಟ್ ರಿಲೀಸ್ ಸಂಪುಟ 19, ಪುಟ 176, 1898). ಕೊಕಾಘ 99.2