Loading...

Loading

Loading
(You are in the browser Reader mode)

ಅಧ್ಯಾಯ-44 — ದೇವರ ಮನೆ ಅಥವಾ ದೇವರ ಸಭೆ

ನಮ್ಮ ಸ್ವಭಾವವುಳ್ಳ ನಂಬಿಗಸ್ತ ವಿಶ್ವಾಸಿಗೆ ದೇವರಸಭೆಯು ಪರಲೋಕದ ಬಾಗಿಲಾಗಿದೆ.ಸಭೆಯಲ್ಲಿ ಮಾಡುವ ಸ್ತುತಿಗೀತೆಗಳು, ಪ್ರಾರ್ಥನೆ ಹಾಗೂ ಕ್ರಿಸ್ತನ ಸೇವಕರಿಂದ ಬರುವಸಂದೇಶಗಳು ವಿಶ್ವಾಸಿಗಳನ್ನು ಪರಲೋಕದಲ್ಲಿರುವ ಸಭೆಗೆ ಸಿದ್ಧಪಡಿಸಲು ದೇವರುನೇಮಿಸಿದ ಸಾಧನಗಳಾಗಿವೆ. KanCCh 312.1

ಮನೆಯು ಕುಟುಂಬಕ್ಕೆ ದೇವಾಲಯವಾಗಿದ್ದು, ವೈಯಕ್ತಿಕ ಆರಾಧನೆ, ಪ್ರಾರ್ಥನೆಗೆಪ್ರಶಸ್ತವಾದ ಏಕಾಂತ ಸ್ಥಳವಾಗಿದೆ, ಆದರೆ ಸಭೆಯು ವಿಶ್ವಾಸಿಗಳು ಒಟ್ಟಾಗಿ ಸೇರುವದೇವಾಲಯವಾಗಿದೆ. ದೇವಾರಾಧನೆ ಮಾಡುವ ಸಮಯ, ಸ್ಥಳ ಹಾಗೂ ವಿಧಿವಿಧಾನಗಳಿಗೆನೀತಿ ನಿಯಮಗಳು ಇರಬೇಕು. ದೇವಾರಾಧನೆಗೆ ಸಂಬಂಧಪಟ್ಟ ಯಾವುದೇಪರಿಶುದ್ಧವಾದವುಗಳ ಬಗ್ಗೆ ನಿರ್ಲಕ್ಷ್ಯ ತೋರಬಾರದು ಅಥವಾ ತಾತ್ಸಾರ ಮಾಡಬಾರದು.ದೇವರನ್ನು ಉತ್ತಮವಾದ ರೀತಿಯಲ್ಲಿ ಸ್ತುತಿಸಿ ಆರಾಧಿಸುವವರು ಪರಿಶುದ್ಧ ವಸ್ತುಗಳನ್ನುಸಾಮಾನ್ಯ ವಸ್ತುಗಳಿಗಿಂತವಿಶಿಷ್ಟವಾದದ್ದೆಂದು ಪರಿಗಣಿಸುತ್ತಾರೆ. ವಿಶಾಲವಾದಮನೋಭಾವನೆ. ಶ್ರೇಷ್ಟವಾದ ಚಿಂತನೆಗಳು ಹಾಗೂ ಹೆಬ್ಬಯಕೆ ಹೊಂದಿರುವವರುದೈವೀಕವಸ್ತುಗಳನ್ನು ಪವಿತ್ರವೆಂದು ಎಣಿಸುವರು. ತಮ್ಮ ಊರಿನಲ್ಲಿ, ಪರ್ವತ ಪ್ರದೇಶದಗುಹೆಗಳಲ್ಲಿ, ಅಡವಿಯಲ್ಲಾಗಲಿ ಯಾರಿಗೆ ದೇವಾಲಯವಿರುತ್ತದೋ ಅವರು ಸಂತೋಷಉಳ್ಳವರಾಗಿರುವರು. ಅದು ದೇವರಿಗಾಗಿ ಅತ್ಯುತ್ತಮವಾಗಿಟ್ಟುಕೊಂಡಲ್ಲಿ ಆತನು ತನ್ನಪ್ರಸನ್ನತೆಯಿಂದ ಅದನ್ನುಪರಿಶುದ್ಧಮಾಡುವನು ಹಾಗೂ ಅದು ಸೇನಾಧೀಶ್ವರನಾದಕರ್ತನಿಗೆ ಪವಿತ್ರ ಸ್ಥಳವಾಗಿರುವುದು. KanCCh 312.2