Loading…
Loading…
(You are in the browser Reader mode)
ಅಧ್ಯಾಯ-21 — ಗಂಡ ಹೆಂಡತಿ ನಡುವಣ ಸಂಬಂಧ
ಮದುವೆಯ ಸಂಬಂಧವು ದೇವರ ಪವಿತ್ರ ಸಂಸ್ಕಾರವಾಗಿದೆ ಎಂದು ಯಾರು ಪರಿಗಣಿಸುತ್ತಾರೋ, ಅವರು ಆತನ ಪರಿಶುದ್ಧವಾದ ಹತ್ತುಆಜ್ಞೆಗಳಿಂದ ರಕ್ಷಿಸಲ್ಪಡುತ್ತಾರೆ ಹಾಗೂ ತಮ್ಮ ವಿವೇಚನಾ ಶಕ್ತಿಯಿಂದ ನಿಯಂತ್ರಿಸಲ್ಪಡುತ್ತಾರೆ. ಸ್ತ್ರೀ ಪುರುಷರು ಬ್ರಹ್ಮಚರ್ಯ ಪಾಲಿಸಬೇಕೆಂದು ಯೇಸುಸ್ವಾಮಿ ಹೇಳಲಿಲ್ಲ. ಆತನು ಮದುವೆಯ ಪವಿತ್ರ ಸಂಬಂಧವನ್ನು ನಾಶಮಾಡಲು ಬರಲಿಲ್ಲ, ಬದಲಾಗಿ ಏದೆನ್‍ತೋಟದಲ್ಲಿ ಆದಾಮಹವ್ವಳ ನಡುವೆ ಇದ್ದಂತ ಮೊದಲಿನ ಪಾವಿತ್ರ್ಯತೆಗೆ ತಂದು ಅದನ್ನು ಉನ್ನತ ಸ್ಥಾನಕ್ಕೇರಿಸಿದನು. ಪರಿಶುದ್ಧವಾದ ಮತ್ತು ನಿಸ್ವಾರ್ಥ ಪ್ರೀತಿತುಂಬಿದ ಕುಟುಂಬ ಸಂಬಂಧಗಳು ಆತನಿಗೆ ಬಹು ಸಂತೋಷ ತರುತ್ತವೆ. KanCCh 147.1