Loading…
Loading…
(You are in the browser Reader mode)
ಅಧ್ಯಾಯ-23 — ಕ್ರೈಸ್ತ ತಂದೆ ತಾಯಿಯರು
ಕ್ರೈಸ್ತ ತಂದೆ-ತಾಯಿಯರಾದ ನೀವು ಮನೆಯಲ್ಲಿ ಪ್ರಾಮಾಣಿಕವಾಗಿ ನಿಮ್ಮ ಕರ್ತವ್ಯಗಳನ್ನು ಮಾಡಬೇಕು. ತಂದೆಯು ಕುಟುಂಬದ ಯೋಜಕನೂ ಹಾಗೂ ತಾಯಿ ಮನೆಯಲ್ಲಿ ದೇವರ ಸೇವೆ ಮಾಡುವವಳಾಗಿದ್ದು, ಮನೆಯ ಹೊರಗೂ ಸಹ ಒಳ್ಳೆಯದನ್ನು ಮಾಡುವ ರಾಯಭಾರಿಗಳಾಗಿದ್ದಾರೆ. ನಿಮ್ಮ ಸಾಮರ್ಥ್ಯ ಹೆಚ್ಚಿದಾಗ, ನೀವು ಸಭೆ ಹಾಗೂ ನೆರೆಹೊರೆಯಲ್ಲಿ ಸೇವೆ ಮಾಡಲು ಯೋಗ್ಯರಾಗುವಿರಿ. ನಿಮ್ಮ ಮಕ್ಕಳು ಹಾಗೂ ನೀವು ದೇವರೊಂದಿಗೆ ಒಂದಾದಾಗ, ನೀವೆಲ್ಲರೂ ದೇವರೊಂದಿಗೆ ಸಹ ಕೆಲಸಗಾರರಾಗುವಿರಿ. KanCCh 163.1